Wednesday, July 9, 2025

Parashurama

 ಪರಶುರಾಮ

*ಹಡೆದಾ ತಾಯಿಯ ಶಿರವಾ ಕಡಿದ ಪರಶುರಾಮ*

ಪರಮಾತ್ಮನ ದಶಾವತಾರಗಳಲ್ಲಿ ಗುರುತಿಸಲ್ಪಟ್ಟ ಶ್ರೀ ಪರಶುರಾಮ ದೇವರ‌ ಅವತಾರ ಆಗಿದ್ದು ವೈಶಾಖ ಶುದ್ಧ ತೃತೀಯ ಅಕ್ಷಯ ತೃತೀಯ ದಿನದಂದು ಜಮದಗ್ನಿ ರೇಣುಕಾ ದಂಪತಿಗಳ ಮಗನಾಗಿ ಅವತರಿಸಿದ ರೂಪ ಪರಶುರಾಮ. ಪರಶುರಾಮನ ಮಡದಿಯ ಹೆಸರು ಹರಿಣಿ.

ಜಮದಗ್ನಿ ಮುನಿಗಳ‌ ಪುತ್ರನಾಗಿ ಅವತರಿಸಿದ ಶ್ರೀಹರಿಯ ಹೆಸರು *ರಾಮ*.  ಆದರೆ ಅವನ ಆಯುಧ ಪರಶು ಅಂದರೆ ಕೊಡಲಿ.  ಯಾವಾಗಲೂ ಪರಶು ಒಂದಿಗೆ ಸುತ್ತಾಡುತ್ತಿದ್ದರಿಂದ ಅವನು *ಪರಶುರಾಮ* ಎಂದು ಪ್ರಸಿದ್ಧನಾದ.


ಭೃಗು ಮಹರ್ಷಿಗಳ ವಂಶದಲ್ಲಿ ಬಂದಿರುವುದರಿಂದ ಅವನನ್ನು *ಭಾರ್ಗವ ರಾಮ* ಎನ್ನುತ್ತಾರೆ.

*ಹಡೆದಾ ತಾಯಿಯ ಶಿರವಾ ಕಡಿದ* :

ಒಮ್ಮೆ ಪರಶುರಾಮನ ತಾಯಿ ರೇಣುಕಾದೇವಿ ನೀರು ತರಲು ನದಿಗೆ ಹೋಗಿದ್ದಾಗ,  ಗಂಧರ್ವ ರಾಜ ಚಿತ್ರರಥನು ಅಪ್ಸರೆಯರೊಂದಿಗೆ ಅಲ್ಲಿ  ಇರುತ್ತಾನೆ. ಒಂದು ಕ್ಷಣ ಮೈಮರೆತು ತನಗೂ ಆ ವೈಭೋಗ ಇದ್ದಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುತ್ತಾರೆ. ಅದು ಜಮದಗ್ನಿಗಳ  ದಿವ್ಯದೃಷ್ಟಿಗೆ  ತಿಳಿದು ಅವರು ಕೋಪಗೊಳ್ಳುತ್ತಾರೆ.  ತಮ್ಮ ಮಕ್ಕಳನ್ನು ಕರೆದು  ನಿಮ್ಮ ತಾಯಿಯನ್ನು ಕೊಲ್ಲಿ’ ಎಂದು ಆದೇಶಿಸುತ್ತಾರೆ. ಮಾತೃ ಹತ್ಯೆ ಮಾಡುವುದೇ?  ಅಂತಹ ಪಾಪ ಮಾಡಲಾರೆ’ ಎಂದು ಎಲ್ಲ ಮಕ್ಕಳೂ ಹೇಳಲು, ಜಮದಗ್ನಿಯು ಆಗ ತನ್ನ ಆಜ್ಞೆಯನ್ನು ಉಲ್ಲಂಘಿಸಿದ ತನ್ನ ಮಕ್ಕಳನ್ನು ಮತ್ತು ಹೆಂಡತಿಯನ್ನು ಕೊಲ್ಲಲು ತನ್ನ ಕೊನೆಯ ಮಗನಾದ ಪರಶುರಾಮನಿಗೆ ಆದೇಶಿಸುತ್ತಾರೆ. ತನ್ನ ತಂದೆಯ ಶಕ್ತಿಯನ್ನು ಅರಿತ ಪರಶುರಾಮನು ತನ್ನ ತಾಯಿ ಮತ್ತು ತನ್ನ ಅಣ್ಣಂದಿರನ್ನು ತತ್‌ಕ್ಷಣ ಕೊಲ್ಲುತ್ತಾನೆ. ಜಮದಗ್ನಿಯು ಸಂತಸಗೊಂಡು, ಮಗನಿಗೆ ವರವನ್ನು ಕೇಳು ನೀಡುವೆ ಎನ್ನುತ್ತಾರೆ. ಪರಶುರಾಮನು ತನ್ನ ತಾಯಿ ಮತ್ತು ಸಹೋದರರು ಮತ್ತೆ ಬದುಕಲಿ ಮತ್ತು ನನ್ನಿಂದ ಹತರಾಗಿರುವುದು ಅವರ ಸ್ಮರಣೆಗೆ ಬಾರದಿರಲಿ ಎಂದು ವರವನ್ನು ಕೇಳಿದನು. ಆಗ ಪರಶುರಾಮನ ತಾಯಿ ಮತ್ತು ಸಹೋದರರು ಗಾಢ ನಿದ್ರೆಯಿಂದ ಎದ್ದಂತೆ ಆನಂದದಿಂದ ಎದ್ದು ನಿಂತರು.ಇದರಿಂದ ಪಿತೃವಾಕ್ಯ ಪರಿಪಾಲಕನಾದ..

ದೇವಾಲಯವಿದೆ ಮತ್ತು ಬಂಡೆಯಲ್ಲಿ ಸಾಮಾನ್ಯ ಮಾನವರ 4 ಪಟ್ಟು ಗಾತ್ರದ ಹೆಜ್ಜೆಗುರುತುಗಳಿವೆ.

ಗೋಕರ್ಣದಿಂದ ಕನ್ಯಾಕುಮಾರಿವರೆಗಿನ ಭಾರತದ ಪಶ್ಚಿಮ ಕರಾವಳಿಯ ಪ್ರದೇಶವನ್ನು ಪರಶುರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ.ಉಡುಪಿ ಕ್ಷೇತ್ರ, ಗೋಕರ್ಣ ಇವೆಲ್ಲ ಪರಶುರಾಮ ಕ್ಷೇತ್ರಗಳು

ಆ ಕರ್ತವ್ಯ ಮುಗಿದ ಮೇಲೆ ಅವನು ಪುನಃ ಬ್ರಾಹ್ಮಣನಾಗಿ ಮಹೇಂದ್ರಗಿರಿಗೆ ಹೋಗಿ ತಪಸ್ಸಿನಲ್ಲಿ ತೊಡಗುತ್ತಾನೆ. ಪರಶುರಾಮನು ಪ್ರಾಜ್ಞ ಬ್ರಾಹ್ಮಣನಾಗಿ ಈಗಲೂ ಮಹೇಂದ್ರ ಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ಹೇಳುತ್ತಾರೆ.

*ಪರಶುರಾಮನ ಹಲವಾರು ಹೆಸರುಗಳಿಂದ ಕರೆಯುತ್ತಾರೆ*.

*ಭಾರ್ಗವರಾಮ* –  ಭೃಗುವಂಶದಲ್ಲಿ ಜನಿಸಿದ್ದರಿಂದ.

ಭೃಗು – ಚ್ಯವನ –  ಔರ್ವ – ಋಚೀಕ – ಜಮದಗ್ನಿ – ಪರಶುರಾಮ.

*ರೇಣುಕೇಯ*- ರೇಣುಕಾದೇವಿಯ ಮಗನಾದ್ದರಿಂದ

*ಜಾಮದಗ್ಯ* – ಜಮದಗ್ನಿ ಋಷಿಗಳ ಮಗನಾದ್ದರಿಂದ

*ಪರಶುಧರ / ಪರಶುರಾಮ* – ಪರಶುವನ್ನು ಹೋಗುತ್ತಿರುವುದರಿಂದ

*ಮಾತೃಕಾಚ್ಛಿದ* – ತಾಯಿಯ ತಲೆಯನ್ನು ಕಡಿದುದರಿಂದ

*ಮಾತೃಪ್ರನಾದ* –  ತಲೆ ಕಡಿದ ತಾಯಿಗೆ ಮತ್ತೆ ಜೀವವನ್ನು ತಂದೆಯ ವರಮೂಲಕ ಪಡೆದಿದ್ದರಿಂದ

*ಕಾರ್ತವೀರ್ಯಾರಿ* – ತನ್ನ ತಂದೆಯ ಶಿರವ ಕಡಿದ ಕಾರ್ತವೀರ್ಯನ ಕೊಂದದ್ದರಿಂದ

*ಕ್ಷತ್ರಾಂತಕ* – 21 ಬಾರಿ ಭೂಪ್ರದಕ್ಷಿಣೆ ಮಾಡಿ ಸಮಸ್ತ ದುಷ್ಟ ಕ್ಷತ್ರಿಯರ ಕೊಂದಿದ್ದರಿಂದ

*ಸಹ್ಯಾದ್ರಿವಾಸಿ* – ಈಗಲೂ ಸಹ್ಯಾದ್ರಿಯಲ್ಲಿ ಪರಶುರಾಮ ಕ್ಷೇತ್ರ ಸೃಷ್ಟಿಸಿ ನೆಲೆಸಿದ್ದರಿಂದ

*ಚಿರಂಜೀವಿ* – ಸಪ್ತ ಚಿರಂಜೀವಿಗಳಲ್ಲಿ ಇವನೂ ಒಬ್ಬನಾದ್ದರಿಂದ